ಪೋಸ್ಟ್‌ಗಳು

ಡಿಸೆಂಬರ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕವನ ಮತ್ತು ಕವಿತೆಯ ವ್ಯತ್ಯಾಸಗಳು

ಎಷ್ಟೋ ಜನರು ಒಂದು ಕವನವನ್ನು ಕವಿತೆ ಎಂದು, ಕವಿತೆಯನ್ನು ಕವನವೆಂದು ಕರೆಯುವುದನ್ನು ಬಹುಷಃ ಎಲ್ಲರೂ ಸಹಜವಾಗಿ ನೋಡಿಯೇ ಇರುತ್ತೀವಿ. ಆದರೇ... ಓದುಗನಿಗೆ ಅದು ಒಂದು ವಿಷಯವೇ ಅಲ್ಲದಿರಬಹುದು. ಯಾಕೆಂದರೇ ಒಂದು ಕವನ ಅಥ್ವಾ ಕವಿತೆಯನ್ನು ಓದಿದನಂತರ ಅದ್ಭುತ ಇಲ್ಲವಾದರೇ ಸೂಪರ್ ಎಂದು ತನ್ನ ಮೆಚ್ಚುಗೆ ತಿಳಿಸಿ ಬರೆದವನಿಗೆ ಪ್ರೋತ್ಸಾಹಿಸಿ ಸುಮ್ಮನಾಗಿಬಿಡುತ್ತಾನೆ. ಆದರೇ ಇದರಿಂದ ಬರೆಹಗಾರನಿಗೆ ಅಷ್ಟಾಗಿ ಸಂತೋಷ ಸಿಗುವುದಿಲ್ಲ ಎನ್ನಬಹುದು. ಯಾಕೆಂದರೆ... ಆತ ಒಂದು ಕಾವ್ಯ ರಚನೆ ಮಾಡುವ ಮುನ್ನ ತನ್ನ ಅನುಭವ ಮತ್ತು ಕಲ್ಪನೆಗಳ ಆಧಾರದಿಂದ ಮನಸ್ಸಲ್ಲಿ ಮೂಡಿದ ಭಾವನೆಗಳಿಗೆ ಅಕ್ಷರದ ರೂಪ ನೀಡಿ, ತನ್ನದೇ ಆದ ಶೈಲಿಯಿಂದ ಪದ ಚಮತ್ಕಾರವನ್ನುಂಟು ಮಾಡಿ ಬರೆದಿರುತ್ತಾನೆ. ಅವನ ಆಶಯ ತನ್ನ ಬರೆಹ ಸ್ವಲ್ಪ ಜನರಿಗಾದರೂ ಸರಿಯಾಗಿ ಅರ್ಥವಾದರೇ ಸಾರ್ಥಕ ಎನ್ನುವಂಥ ಮನಸ್ಥಿತಿ ಎಲ್ಲ ಕವಿಗಳಲ್ಲೂ ಸಹಜವಾಗಿಯೇ ಇರುವಂತಹದ್ದು. ಅದನ್ನು ಅರಿತ ಜನರು ಕವನಕ್ಕೆ ತಕ್ಕಂತೆ ವಿಮರ್ಶೆ ಮಾಡಿದಾಗ ಅವನಲ್ಲಿ ಆಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಈ ನಿಟ್ಟಿನ ಪ್ರಶಂಸೆಗಳು ಸಮಾಜಕ್ಕೆ ಆತನು ಇನ್ನಷ್ಟು ಕೊಡುಗೆ ನೀಡಲು ಪ್ರೇರೆಪಿಸುತ್ತವೆ. ಆದರೆ ಸುಮ್ಮನೆ ಬರೆದ ಸಾಲುಗಳು ಕವನ ಅಥ್ವಾ ಕವಿತೆಯಾಗುವುದಿಲ್ಲ. ಬರೆಹಗಾರನಲ್ಲಿ ಒಂದು ವಿಷಯವಸ್ತು ನಿರ್ಧಿಷ್ಟವಾದ ಸ್ಥಾನದಲ್ಲಿದ್ದು ಅದಕ್ಕೆ ಪದಗಳನ್ನು ಬೆಸೆದಾಗ ಅದು ಕವನದ ರೂಪ ಪಡೆದು ಜನರಿಗೆ ಓದಲು ಮುದನೀಡುತ್ತದೆ....